¡Sorpréndeme!

ಕ್ರಿಕೆಟ್ ಆಟಗಾರರಿಗೆ ಇನ್ಮುಂದೆ ಡಿಎನ್ಎ ಪರೀಕ್ಷೆ ಕಡ್ಡಾಯ | Oneindia Kannada

2017-11-13 182 Dailymotion

ಟೀಂ ಇಂಡಿಯಾದ ಆಟಗಾರರಲ್ಲಿ ವಿವಿಧ ರೀತಿಯ ಫಿಟ್ನೆಸ್ ಪರೀಕ್ಷೆಗಳು ಮುಂದೆ ಕಾದಿವೆ. ಸ್ಕಿನ್ ಫೋಲ್ಡ್ ಟೆಸ್ಟ್, ಡೆಕ್ಸಾ ಟೆಸ್ಟ್ ನಂತರ ಈಗ ಡಿಎನ್ಎ ಪರೀಕ್ಷೆ ಕಡ್ಡಾಯವಾಗಲಿದೆ.ಆಟಗಾರರ ದೇಹದಲ್ಲಿರುವ ಕೊಬ್ಬಿನಾಂಶ ಪತ್ತೆಗೆ ಇದು ಸಹಕಾರಿ, ಡಿಎನ್‌ಎ ಪರೀಕ್ಷೆಯಿಂದ ಆಟಗಾರರ ಅನುವಂಶೀಯ ಫಿಟ್ನೆಸ್ ಬಗ್ಗೆ ತಿಳಿಯಲಿದೆ ಎಂದು ತಂಡದ ತರಬೇತುದಾರ ಶಂಕರ್ ಬಸು ಅವರು ಶಿಫಾರಸು ಮಾಡಿದ್ದು, ಬಿಸಿಸಿಐ ಕೂಡಾ ಸಮ್ಮತಿಸಿದೆ.ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನನ್ನು 25 ಸಾವಿರದಿಂದ 30 ಸಾವಿರ ರೂ. ವೆಚ್ಚದಲ್ಲಿ ಡಿಎನ್‌ಎ ಪರೀಕ್ಷೆಗೊಳಪಡಿಸಲಾಗುತ್ತದೆ.ಈ ಹಿಂದೆ ಅಮೆರಿಕದಲ್ಲಿ ಮೊದಲ ಬಾರಿ ಎನ್‌ಬಿಎ(ಬಾಸ್ಕೆಟ್‌ಬಾಲ್) ಮತ್ತು ಎನ್‌ಎಫ್‌ಎಲ್ ಆಟಗಾರರ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.ಆಟಗಾರರ ವೇಗವರ್ಧನೆ ಕೊಬ್ಬು ಕರಗಿಸಲು, ಸಹಿಷ್ಣುತೆ, ಚೇತರಿಸಿಕೊಳ್ಳುವ ಸಮಯ ಮತ್ತು ಸ್ನಾಯುವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಯಾವೆಲ್ಲ ಕ್ರಮ ಅನುಸರಿಸಬೇಕು ಎಂಬುದನ್ನು ಡಿಎನ್ಎ ವರದಿ ಮೂಲಕ ತಿಳಿಯಬಹುದಾಗಿದೆ.

The new DNA test is made mandatory to Indian cricket team . This happens to be the most accurate and most effective fitness test to make sure our players are fit.